ಕತಾರ್ ನಲ್ಲಿ 12 ವರ್ಷ ಕಳೆದಮೇಲೆ , ಒಂದು ಸಂಜೆಯ ಮಾತು . ಪಾರ್ಕಿನ ಲಾನ್ ನಲ್ಲಿ ಮಕ್ಕಳನ್ನು ಕರೆದುಕೊಂಡು ಅಡ್ಡಾಡ್ಡುತ್ತಿದ್ಧೆ. ಇನ್ನೊಬ್ಬ ಹೆಂಗಸು ನನ್ನ ನೋಡಿ ಒಮ್ಮೆ ಒಂದು ನೆಗೆ ಸಮೇತ ಮಾತನಾಡಿಸಿದರು. ಮಾತುಕತೆಯ ಆರಂಭವೇ ಹೀಗಾಯ್ತು. "ನೀವು ಎಲ್ಲಿಯವರು" ಎಂದು ಕೇಳಿದೆ. ನಾನು ಕರ್ನಾಟಕ ದವಳು ಎಂದರು. ಅಬ್ಭಾ. ಖುಷಿ. ನನ್ನ ಒಳಗೆ ಒಂದು ಮಗುವಂಥಹ ಸಂತಸ. "ಒಹೋ ನಾನು ಕರ್ನಾಟಕದವೇಳೆ" ಎಂದೇ ಮಾತನಾಡಿಸಿದೆ. ಮಾತು ಕಥೆಯ ಮಧ್ಯ ಹೇಳಿದರು "ಹ್ಞಾ ಹಾವೇರಿಯಲ್ಲಿ ನಮ್ಮ ಅಂಗಡಿ. ಅದೇ ಜನ್ಮಸ್ಥಾನ, ಹಾಗು ನಾವು ಮಾರ್ವಾಡಿ ವಂಶ ಅಂತ".
"ಆಹಾ , ಆದರೆ ಹೃದಯಪೂರ್ವಕವಾಗಿ ಕರ್ನಾಟಕ ದವಳು ಅಂತ ಹೇಳಿದ್ರೀಲ್ಲ, ನನಗೆ ಎಂಥ ಹೆಮ್ಮೆ ಅನ್ಸ್ತಿಧೆ " ಅಂತ ನಾನು ಹೇಳಿದರೆ "ಅಯ್ಯೋ ನಾವು ಹುಟ್ಟು ಬೆಳೆದ ಊರು ಆಷ್ಟೇ ಅಲ್ಲ ನಮಗೆ ಅನ್ನ ಕೊಟ್ಟ ಊರು ಹಾವೇರಿ " ಅಂದರು.
ಕನ್ನಡ ಒಂದು ಭಾಷೆ, ಸಂಸ್ಕೃತಿ ಅಷ್ಟೇ ಅಲ್ಲ. ಒಂದು ಹೆಮ್ಮೆ. ಒಂದು ಪದಕ. ನಿಜ .
ಇನ್ನೊಂದು ಸಂಜೆಯ ಕಥೆ. ತೀವ್ರ ಬೆನ್ನು ನೋವು ಇಟ್ಟುಕೊಂಡು ಡಾಕ್ಟರ್ ಹತ್ತಿರ ಒಂದು ಪ್ರೈವೇಟ್ ಆಸ್ಪತ್ರೆಗೆ ಒಡಿದೆ. ಡಾಕ್ಟ್ರು ಕೇಳಿದರು ಎಲ್ಲಿಯವರು ಅಂತ. ಕನ್ನಡ ದಲ್ಲೇ ಮಾತನಾಡಿಸಿದರು. ನಾನೂ ಕರ್ನಾಟಕಾನೇ ಅಂದರು. ಅವರ ಹೆಸರು ಹೇಳಿತು ಅವರು ಕೇರಳದವರು ಅಂತ, ನಾನು ಕೇಳಿಯೆಯೇ ಬಿಟ್ಟೆ, "ಕರ್ನಾಟಕ ದಲ್ಲಿ ಓದಿಬೇಕಲ್ಲವೇ ಡಾಕ್ಟ್ರೇ" ಅಂತ. ನಕ್ಕು ಹೇಳಿದರು, ಹ್ಞಾ ೧೫ ವರ್ಷ ಕಳೆದ ಮೇಲೆ ಅದೇ ನನ್ನ ಊರು ಈಗ ಎಂದರು.
ಅಬ್ಬಾಹ್, ನಮ್ಮ ನಾಡಿನ ಬಗ್ಗೆ ಪರ ಊರವರು ಇಷ್ಟು ಪ್ರೀತಿ, ಅಕ್ಕರೆ, ಹೆಮ್ಮೆ, ಇಟ್ಟುಕೊಂಡಿದ್ದಾರೆ. ಇದು. ಕನ್ನಡ ಒಂದು ಭಾಷೆ ಅಷ್ಟೇ ಅಲ್ಲ ,ಒಂದು ಹೆಮ್ಮೆ, ಮನುಷ್ಯನ್ನ ಸೇರಿಸುವ ಸೂತ್ರ.
ಅಬ್ಭಾ ! ಏನು ಖುಷಿ. ಎಲ್ಲರಿಗು ಹೇಳುತ್ತಾ ಬಂದೆ ಈ ಸುದ್ದಿ.
ಅಷ್ಠಕ್ಕೂ, ಮುಂಚೊಮ್ಮೆ ಸಿಕ್ಕಿದ್ದ ಕೆಲ ಕರ್ನಾಟಕದ ಜನರ ಮೇಲಿನೆ ಸಿಟ್ಟು ನನಗೆ ಕಮ್ಮಿ ಆಗಿಲ್ಲ. "ನಾನಾ ಮಂಗಳೂರು, ಅಯ್ಯೋ, ಕತಾರ್ ನಲ್ಲಿ ೨೦ ವರ್ಷ ಆಯಿತು ರೀ, ಕನ್ನಡ ಮರೆತು ಹೋಗಿದೆ you know " ಅಂದಾಗ, ನಾನು ಬಿಡದೇ, ಅಯ್ಯೋ ಊರು, ಅಲ್ಲಿಯ ಭಾಷೆ ಹೇಗ್ರಿ ಮರೀತೀರಾ. ನಂಗೆ ಬೇಕು ಅಂದ್ರು ಮರಿಯಲ್ಲ. ಅಂತ ಹೇಳಿದೆ , ಬಾಯಿಗೆ ಬೀಗ ಹಾಕದೇ .
ಏನು ಮಾಡಲಿ, ನಾನೋ ಕನ್ನಡದವಳು.
ಕನ್ನಡ ಒಂದು ಭಾಷೆ, ಸಂಸ್ಕೃತಿ ಅಷ್ಟೇ ಅಲ್ಲ. ಒಂದು ಹೆಮ್ಮೆ. ಒಂದು ಪದಕ.
ಕನ್ನಡ ನಮ್ಮ ಹೆಮ್ಮೆ.
ಜೈ ಕರ್ನಾಟಕ.
ಏನು ಮಾಡಲಿ, ನಾನೋ ಕನ್ನಡದವಳು.
ಕನ್ನಡ ಒಂದು ಭಾಷೆ, ಸಂಸ್ಕೃತಿ ಅಷ್ಟೇ ಅಲ್ಲ. ಒಂದು ಹೆಮ್ಮೆ. ಒಂದು ಪದಕ.
ಕನ್ನಡ ನಮ್ಮ ಹೆಮ್ಮೆ.
ಜೈ ಕರ್ನಾಟಕ.
---------------------------------------------